ಬ್ರೇಕಿಂಗ್ ನ್ಯೂಸ್: ದೇವೆಗೌಡರ ಕುಟುಂಬದ ಹಗರಣಗಳನ್ನು ಬಯಲಿಗೆಳೆದ ಬಿ.ಜೆ.ಪಿ...!!! ೨ ಎಕರೆ ಇದ್ದ ಗೌಡರ ಕುಟುಂಬದ ಆಸ್ತಿ ಈಗ ಎಷ್ಟಿದೆ ಗೊತ್ತಾ..???
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ಹಗರಣಗಳ ಬಗ್ಗೆ ಬಿ.ಜೆ.ಪಿ ಬಯಲಿಗೆಳೆದಿದೆ. ಪತ್ರಿಕಾಗೋಷ್ಠಿಯಲ್ಲಿ ಎಲ್ಲಾ ಹಗರಣಗಳನ್ನು ವಿವರಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಬಿ.ಜೆ.ಪಿ ನಾಯಕರು ಹೇಳಿದ್ದೇನು...???
* ಚಿತ್ರದುರ್ಗ ಜಿಲ್ಲೆಯಲ್ಲಿ 80 ಹೆಕ್ಟೇರ್ ಜಾಗವನ್ನು ಕುಮಾರಸ್ವಾಮಿ ಕುಟುಂಬ ಕಬಳಿಸಿದೆ. ಈ ಕೇಸ್‍ನಲ್ಲಿ ಕುಮಾರಸ್ವಾಮಿ ಜಾಮೀನಿನ ಮೇಲೆ ಹೊರಗಿದ್ದಾರೆ.
* ರಾಮನಗರದ ಪಡುವಲಹಿಪ್ಪೆಯಲ್ಲಿ 10 ಎಕರೆ ಜಾಮೀನು ಮಂಜೂರಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಪತ್ನಿ ಚೆನ್ನಮ್ಮನವರು ಭೂರಹಿತರು ಎಂದು ಹೇಳಿಕೊಂಡು ಈ ಜಮೀನನ್ನು ಕಬಳಿಸಿದ್ದಾರೆ. ಇದರ ಬಗ್ಗೆ ಇನ್ನಷ್ಟು ತನಿಖೆ ನಡೆಸಬೇಕಾಗಿದೆ.
* ಥಣೀಸಂಸ್ರ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಹೈಕೋರ್ಟ್‍ನಿಂದ ಜಾಮೀನು ಪಡೆದು ಹೊರಗಿದ್ದಾರೆ. ಸಿಎಂ ಅದ ಮರುದಿನವೇ ಜಾಮೀನು ಪಡೆದಿದ್ದಾರೆ. ಇಂದಿಗೂ ಜಾಮೀನಿನಲ್ಲೇ ಇದ್ದಾರೆ.
* ಹಾಸನದ ಸೋಮನಹಳ್ಳಿಯಲ್ಲಿ ರೇವಣ್ಣನ ಮಗ ಪ್ರಜ್ವಲ್ ರೇವಣ್ಣನ ಹೆಸರಿನಲ್ಲಿ ಅಕ್ರಮ ಜಾಗ ಮಾಡಿಟ್ಟಿದ್ದಾರೆ. ಇದು ಸರ್ಕಾರಿ ಜಾಗವಾಗಿದ್ದು ಇದನ್ನು ದೇವೇಗೌಡರ ಕುಟುಂಬ ಕಬಳಿಸಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಬೇಕಾಗಿದ್ದ ಜಾಗಗಳನ್ನು ದೇವೇಗೌಡರ ಕುಟುಂಬ ಕಬಳಿಸಿದೆ. ಈ ಆರೋಪವನ್ನು ಸ್ವತಃ ಕಾಂಗ್ರೆಸ್ ನಾಯಕ ಎ.ಮಂಜುನೇ ಮಾಡಿದ್ದಾರೆ. ಇದು ಸತ್ಯವೂ ಹೌದು. ಈ ಬಗ್ಗೆ ತನಿಖೆ ನಡೆಯಬೇಕು.
* 460 ಹೆಕ್ಟೇರ್ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿಯೂ ಕುಮಾರಸ್ವಾಮಿ ಜಾಮೀನಿನಲ್ಲಿದ್ದಾರೆ.
* ಜಂತಕಲ್ ಮೈನಿಂಗ್ ಕೇಸ್‍ನಲ್ಲಿ ಇವರಿಗೆ ಜಾಮೀನು ಸಿಕ್ಕಿದೆ. ಅಕ್ರಮವಾಗಿ ಲೈಸನ್ಸ್ ಇಲ್ಲದವರಿಗೂ ಅವಕಾಶ ನೀಡಿದ್ದಾರೆ. 40 ವರ್ಷಗಳ ಕಾಲ ಪರವಾನಿಗೆ ನೀಡಿದ್ದಾರೆ. ಇದರಲ್ಲಿ ವಿನೋದ್ ಗೋಯೆಲ್ ನಕಲಿ ದಾಖಲೆಗಳನ್ನು ನೀಡಿ ಪರವಾನಿಗೆ ಪಡೆದುಕೊಂಡಿದ್ದಾನೆ. ಇದನ್ನು ಕುಮಾರಸ್ವಾಮಿ ಲಾಭಿಯಿಂದ ಪರ್ಮಿಶನ್ ನೀಡಿದ್ದಾರೆ. ಭೂಗತ ಪಾತಕಿಗಳಿಗೆಲ್ಲಾ ಅವಕಾಶ ನೀಡಿದ್ದಾರೆ. ಇದು ಕಾನೂನು ಪ್ರಕಾರ ಮಹಾ ಅಪರಾಧ. ಈ ಕೇಸಿನಲ್ಲಿಯೂ ಕುಮಾರಸ್ವಾಮಿ ಇಂದಿಗೂ ಜಾಮೀನಿನಲ್ಲಿದ್ದಾರೆ.
* ಏನೂ ಆಗಿಲ್ಲ ಎನ್ನುವ ಹಾಗೆ ಕುಮಾರಸ್ವಾಮಿ ಸಾಚಾನ ತರಹ ಮಾತನಾಡುತ್ತಾರೆ. ಆದರೆ ಅವರ ಕುಟುಂಬದ ಬಹುತೇಕ ಎಲ್ಲಾ ಮಂದಿಯೂ ಒಂದಲ್ಲಾ ಒಂದು ಕೇಸಿನಲ್ಲಿ ಜಾಮೀನಿನ ಮೇಲೆ ತಿರುಗಾಡುತ್ತಿದ್ದಾರೆ.
* 2 ಎಕರೆ 30 ಗುಂಟೆ ಮಾತ್ರ ದೇವೇಗೌಡರ ಕುಟುಂಬದ ಬಳಿ ಆಸ್ತಿ ಇತ್ತು. ಆರಂಭದಲ್ಲಿ ಇಷ್ಟೇ ಆಸ್ತಿ ಇತ್ತು. ಆದರೆ ಇಂದು ಎಷ್ಟು ಸಾವಿರ ಕೋಟಿ ಆಸ್ತಿಯನ್ನು ದೇವೇಗೌಡರ ಕುಟುಂಬ ಹೊಂದಿದೆ.? ಸಾವಿರಾರು ಕೋಟಿ ಆಸ್ತಿ ಮಾಡಿಡಲು ದೇವೇಗೌಡರ ಕುಟುಂಬ ನಡೆಸುತ್ತಿರುವ ಉದ್ಯಮಗಳೇನು?
* ಜನತಾ ದಳ ಸೂಟ್ ಕೇಸ್ ರಾಜಕಾರಣ ನಡೆಸುತ್ತಿದೆ. ದೇವೇಗೌಡರಿಂದ ಹಿಡಿದು ಅವರ ಮೊಮ್ಮಕ್ಕಳವರೆಗೂ ಎಲ್ಲರದ್ದೂ ಸೂಟ್ ಕೇಸ್ ರಾಜಕಾರಣವೇ ಆಗಿ ಹೋಗಿದೆ. ಇದನ್ನು ಸ್ವತಃ ರೇವಣ್ಣನ ಮಗ ಪ್ರಜ್ವಲ್ ರೇವಣ್ಣನೇ ಒಪ್ಪಿಕೊಂಡಿದ್ದಾನೆ. ನಮ್ಮದು ಸೂಟ್ ಕೇಸ್ ಹಾಗೂ ಬಕೆಟ್ ಹಿಡಿಯುವ ಪಕ್ಷವೆಂದು ಪ್ರಜ್ವಲ್ ಕೂಡಾ ಹೇಳಿದ್ದ. ಆದರೆ ಆತನ ಹೆಸರಿನಲ್ಲಿಯೂ ಅಕ್ರಮ ಜಾಗ ಕಬಳಿಸಿದ ಆರೋಪ ಇದೆ.
* ಕುಮಾರಸ್ವಾಮಿಯವರ ಪ್ರಕರಣಗಳು ಒಂದೊಂದಾಗಿಯೇ ಹೊರಬರುತ್ತಿದೆ. ಹೀಗಾಗಿಯೇ ದಂಗೆ ಏಳುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಸಂವಿಧಾನದತ್ತವಾಗಿರುವ ಮುಖ್ಯಮಂತ್ರಿಗಳು ಈ ರೀತಿ ಹೇಳಿಕೆ ನೀಡ್ತಾರಾ? ಕಾನೂನು ಪ್ರಕಾರ ಇದು ರಾಜದ್ರೋಹದ ಹೇಳಿಕೆಗಳು.
* ಕುಮಾರಸ್ವಾಮಿ ಇಂದು ಯಡಿಯೂರಪ್ಪನವರಿಗೆ ಧಮ್ಕಿ ಹಾಕುತ್ತಿದ್ದಾರೆ. ಜಂತಕಲ್ ಮೈನಿಂಗ್ ಕೇಸ್ ಸಹಿತ ಅನೇಕ ಕೇಸಿನಲ್ಲಿ ಇವರಿಗೆ ಜಾಮೀನು ಸಿಕ್ಕಿದೆ. ಈಗ ಕುಮಾರಸ್ವಾಮಿ ಜಾಮೀನಿನ ಮೇಲೆ ತಿರುಗಾಡುತ್ತಿದ್ದಾರೆ. ಇಲ್ಲದಿದ್ದಲ್ಲಿ ಇಷ್ಟೊತ್ತಿಗೆ ಇವರು ಜೈಲಿನಲ್ಲಿರಬೇಕಾಗಿತ್ತು.
* ಹಗರಣಗಳಲ್ಲಿ ಕುಮಾರಸ್ವಾಮಿ ಕುಟುಂಬ ಪಿ.ಹೆಚ್.ಡಿ. ಮಾಡಿದೆ. ಅಷ್ಟೊಂದು ಹಗರಣಗಳನ್ನು ಈ ದೇವೇಗೌಡರ ಕುಟುಂಬ ಇಂದು ಮಾಡಿದೆ. ಆದರೆ ಉಳಿದವರ ಕಡೆ ಬೆರಳು ತೋರಿಸಿ ತನ್ನ ತಪ್ಪನ್ನು ಮರೆಮಾಚುತ್ತಿದ್ದಾರೆ. ಯಡಿಯೂರಪ್ಪನವರ ಕಡೆ ಬೆರಳು ತೋರಿಸಿ ಮಾತನಾಡುವ ನೈತಿಕತೆ ಕುಮಾರಸ್ವಾಮಿಗಿಲ್ಲ.
* ಪವರ್ ಪಾಯಿಂಟ್ ಜಾಸ್ತಿಯಾಗಿ ಬಳ್ಳಾರಿಯಲ್ಲಿ ಈಗ ಹೊಸ ಪಾಯಿಂಟ್ ಆರಂಭವಾಗಿದೆ. ಆದರೆ ಈ ಪಾಯಿಂಟ್‍ನ ಮಾತನ್ನು ಯಾವೊಬ್ಬನೂ ಕೇಳುತ್ತಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ.
* ಯಡಿಯೂರಪ್ಪನವರ ಮನೆಯ ಮುಂದೆ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಸಾಧ್ಯವಿದ್ದರೆ, ಪ್ರತಿಭಟಿಸುವ ಚಟ ಇದ್ದರೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಮನೆ ಮುಂದೆ ಪ್ರತಿಭಟನೆ ನಡೆಸಲಿ.
* ಯಡಿಯೂರಪ್ಪನವರ ಮನೆಯ ಮುಂದೆ ಕಾಂಗ್ರೆಸ್ ಗೂಂಡಾಗಳು ಏಕಾಏಕಿ ನುಗ್ಗಿದ್ದಾರೆ. ಬಿಜೆಪಿ ಶಾಸಕರು ಈ ವೇಳೆ ಮನೆಯಲ್ಲಿದ್ದರು ಹಾಗಾಗಿ ಯಡಿಯೂರಪ್ಪ ಬಚಾವ್ ಆಗಿದ್ದಾರೆ. ನಾವಿಲ್ಲದಿರುತ್ತಿದ್ದರೆ ಯಡಿಯೂರಪ್ಪನವರನ್ನು ಕೊಂದೇ ಬಿಡುತ್ತಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದರೂ ಯಡಿಯೂರಪ್ಪಗೆ ಕನಿಷ್ಟ ಭದ್ರತೆಯನ್ನೂ ಈ ಸರ್ಕಾರ ನೀಡಿಲ್ಲ.
* ರಾಜ್ಯದ ಜನತೆ ದಂಗೆ ಏಳಬೇಕು ಎಂದು ಹೇಳುತ್ತಿದ್ದಾರೆ. ರಾಜ್ಯದ ಯಾವುದೇ ಮುಖ್ಯಮಂತ್ರಿ ಕೂಡಾ ಇಂತಹಾ ಹೇಳಿಕೆ ನೀಡಿದ್ದಿಲ್ಲ. ಆದರೆ ಇವರ ಹೇಳಿಕೆ ಅವರ ಹತಾಶ ಮನೋಭಾವನರಯನ್ನು ತೋರಿಸುತ್ತಿದೆ. ಇಂತಹಾ ಹೇಳಿಕೆ ಉದ್ಧಟತನದ್ದು. ದಂಗೆ ಏಳಿಸುತ್ತೇನೆ ಎನ್ನುವ ಹೇಳಿಕೆ ನಕ್ಸಲರದ್ದು. ನಕ್ಸಲರು ನೀಡುವ ಹೇಳಿಕೆಯಂತೆ ಇವರು ಹೇಳಿಕೆ ನೀಡುತ್ತಿದ್ದಾರೆ.
* ಆಪರೇಶನ್ ಕಮಲ ನಾವು ನಡೆಸುತ್ತಿಲ್ಲ. ಆಪರೇಶನ್ ಕಮಲಕ್ಕೂ ನಮಗೂ ಸಂಬಂಧವೇ ಇಲ್ಲ.
* ಡಿಕೆಶಿ ಮೇಲೆ ಐಟಿ, ಇಡಿ ತನಿಖೆ ನಡೆಸುತ್ತಿದೆ. ಆದರೆ ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಅವರು ತಪ್ಪು ಮಾಡದಿದ್ದರೆ ಹೊರಬರುತ್ತಾರೆ.
* ಯಡಿಯೂರಪ್ಪ ಜೈಲಿಗೆ ಹೋಗಿದ್ದರು ಎಂದು ಹೇಳ್ತೀರಲ್ಲ, ನಿಮ್ಮ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ವೀರಪ್ಪ ಮೂಯ್ಲಿ ಸಹಿತ ಎಷ್ಟು ನಾಯಕರು ಜೈಲಿಗೆ ಹೋಗಿಲ್ಲ. ಇಂದು ಕಾಂಗ್ರೆಸ್ ನಾಯಕರ ಮೇಲೆ ಎಷ್ಟು ಜನರ ಕೇಸಿಲ್ಲ. ಗಾಜಿನ ಮನೆಯಲ್ಲಿ ಕುಳಿತುಕೊಂಡು ನೀವು ಕಲ್ಲು ಹೊಡೆಯಬೇಡಿ ಅಷ್ಟೆ. ಯಡಿಯೂರಪ್ಪ ತನ್ನ ಮೇಲಿದ್ದ ಎಲ್ಲಾ ಕೇಸನ್ನೂ ಮುಕ್ತಗೊಳಿಸಿದ್ದಾರೆ.
* ಮೊದಲು ನಿಮ್ಮ ಮನೆ ಸರಿಮಾಡಿಕೊಳ್ಳಿ, ನಂತರ ನಮಗೆ ಬುದ್ಧಿ ಹೇಳಲು ಬನ್ನಿ. ನಮನ್ನು ಪ್ರಶ್ನಿಸುವ ನೈತಿಕತೆ ನಿಮಗೆಲ್ಲಿದೆ.?
ಇದು ಬಿಜೆಪಿ ನಾಯಕರು ನಡೆಸಿದ ಸುದ್ಧಿಗೋಷ್ಟಿಯ ಹೇಳಿಕೆ. ಸುದ್ಧಿಗೋಷ್ಟಿಯಲ್ಲಿ ಬಿಜೆಪಿ ನಾಯಕರಾದ ಗೋವಿಂದ ಕಾರಜೋಳ, ರವಿ ಕುಮಾರ್, ಪುಟ್ಟಸ್ವಾಮಿ ಹಾಗೂ ಆರ್.ಅಶೋಕ್ ಉಪಸ್ಥಿತಿ ಇದ್ದರು.



Comments
Post a Comment