ಸುದ್ದಿ ಸ್ಪೋಟ : ಸಚಿವ ಸ್ಥಾನ ಸಿಗದ ಕಾಂಗ್ರೆಸ್ ನ ಅತೃಪ್ತ ಶಾಸಕರು ಹೊರ ರಾಜ್ಯಕ್ಕೆ ಶಿಫ್ಟ್...!!! ಅಪರೇಷನ್ ಕಮಲ ಯಶಸ್ವಿ...???
ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಹೋಗುವ ಲಕ್ಷಣಗಳು ಸದ್ಯದ ಮಟ್ಟಿಗೆ ಯಾವ ಲಕ್ಷಣಗಳು ಕಾಣುತ್ತಿಲ್ಲ. ಬೆಳಗಾವಿ ಜಾರಕಿಹೊಳಿ ಸಹೋದರ ಸಿಟ್ಟನ್ನು ಶಮವಾದ ಬೆನ್ನಲೇ, ಸಚಿವ ಸ್ಥಾನ ಸಿಗದ ಕಾಂಗ್ರೆಸ್ ಶಾಸಕರು ರೆಸಾರ್ಟ್ ನತ್ತ ಮುಖ ಮಾಡುತ್ತಿದ್ದು, ಕಾಂಗ್ರೆಸ್ ನಲ್ಲಿ ಹೊಸ ತಲೆ ನೋವು ಶುರುವಾಗಿದೆ.
ಇಂದು ಬೆಳಗ್ಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಸುಧಾಕರ್ ಅವರ ಮನೆಗೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಬಿ ನಾಗರಾಜು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ ಮಾತುಕತೆ ಮುಗಿದ ಬಳಿಕ ಇಬ್ಬರು ಯಾರಿಗೂ ತಿಳಿದ ಹಾಗೇ ಚನ್ನೈನತ್ತ ಪ್ರಯಾಣ ಬೆಳೆಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಇಬ್ಬರ ಜೊತೆಗೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕ ನಾಗೇಶ್ ಕೂಡ ತೆರಳಿದ್ದು, ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣದ ಸುಳಿವು ಬಿಟ್ಟುಕೊಟ್ಟಿದೆ. ಇನ್ನು ಈ ನಡುವೆ ಯಾವುದೇ ಕ್ಷಣದಲ್ಲಿ ರಮೇಶ್ ಜಾರಕಿಹೊಳಿ ಟೀಮ್ ಕೂಡ ಮುಂಬೈಗೆ ಯಾವುದೇ ಕ್ಷಣದಲ್ಲಿ ತೆರಳಬಹುದು ಎನ್ನಲಾಗುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ


Comments
Post a Comment