ಸ್ಪೋಟಕ ಸುದ್ದಿ: ರಫೆಲ್ ಡೀಲ್! ಮೋದಿ ಮೇಲೆ ಕೇಸ್ ಹಾಕಿ ಬಂಧಿಸಿ ಎಂದ ಬೋಸ್ ಮೊಮ್ಮಗ.! ಕಾಂಗ್ರೆಸ್ ಪಕ್ಷಕ್ಕೆ ಕಪಾಳ ಮೋಕ್ಷ ಮಾಡಿದ ಚಂದ್ರಕುಮಾರ್ ಬೋಸ್.!ಬೋಸ್ ಮೊಮ್ಮಗ ಹೇಳಿದ್ದೆನು...???
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮುಂದಿನ ಬಾರಿ ಭಾರತದ ಪ್ರಧಾನಮಂತ್ರಿ ಆಗಬೇಕು ಎನ್ನುವ ಹಂಬಲದಿಂದ ಪ್ರಧಾನಿ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ಮೇಲೆ ಸಿಕ್ಕ ಸಿಕ್ಕ ಹಾಗೆ ಆರೋಪ ಮಾಡಿಕೊಂಡೇ ಬರುತ್ತಿದ್ದಾರೆ. ಕಳೆದ ನಾಲ್ಕೂವರೆ ವರ್ಷದಿಂದ ಪ್ರಧಾನಿ ಮೋದಿಯವರ ಮೇಲೆ ಆರೋಪ ಮಾಡಲು ಯಾವುದೇ ಸಾಕ್ಷ್ಯಗಳು ಸಿಗದೇ ಇದ್ದ ಹಿನ್ನೆಲೆಯಲ್ಲಿ ರಫೆಲ್ ಡೀಲ್ ಬಗ್ಗೆ ಆರೋಪಗಳನ್ನು ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಹೊರತಾದ ಯಾವ ವ್ಯಕ್ತಿಯೂ ರಫೆಲ್ ಡೀಲ್ ಬಗ್ಗೆ ಪ್ರಧಾನಿ ಮೋದಿಯವರನ್ನು ನಿಂದಿಸುತ್ತಿಲ್ಲ. ಇದೀಗ ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸರ ಮೊಮ್ಮಗ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೋಸ್ ಮೊಮ್ಮಗ ಹೇಳಿದ್ದೆನು...???
“ರಾಹುಲ್ ಗಾಂಧಿಯವರೇ, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರಕಾರ ರಫೆಲ್ ಡೀಲ್ ಹಗರಣದಲ್ಲಿ ಭಾಗಿಯಾಗಿದ್ದರೆ ಆಧಾರ ಸಮೇತ ಅವರ ಮೇಲೆ ಕೇಸ್ ದಾಖಲಿಸಿ. ಮಾತ್ರವಲ್ಲದೆ ಸಾಕ್ಷ್ಯ ಸಮೇತರಾಗಿ ಬಂಧಿಸಿ. ಅದು ನಿಮ್ಮಿಂದ ಸಾಧ್ಯವಾಗದಿದ್ದರೆ ಸುಮ್ಮನಿದ್ದು ಬಿಡಿ. ಸುಕಾಸುಮ್ಮನೆ ನಿರಾಧಾರ ಆರೋಪ ಮಾಡಿ ಅಭಿವೃದ್ಧಿಗೆ ಅಡ್ಡಗಾಲು ಹಾಕಬೇಡಿ. ಇದು ನಿಮಗೆ ಶೋಭೆ ತರುವುದಿಲ್ಲ”… ಇದು ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರ ಖಡಕ್ ನುಡಿಗಳು.
ಪದೇ ಪದೇ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬೋಸ್ ಮೊಮ್ಮಗನ ಈ ಹೇಳಿಕೆ ಕಪಾಳ ಮೋಕ್ಷ ಮಾಡಿದಂತಾಗಿದೆ. ಯಾವುದೇ ಪ್ರಕರಣಗಳನ್ನು ಹೂಡದೆ ಏಕಾಏಕಿ ನಿರಾಧಾರ ಪ್ರಧಾನಿ ಮೋದಿ ವಿರುದ್ಧ ಆರೋಪಿಸುವ ರಾಹುಲ್ ಗಾಂಧಿಗೆ ಚಂದ್ರ ಕುಮಾರ್ ಬೋಸ್ ಅವರ ಈ ಮಾತು ಮಾರ್ಮಿಕವಾಗಿದೆ.


Comments
Post a Comment