ವಿಶೇಷ ಸುದ್ದಿ: ಮೋದಿಯವರ ಆಸ್ತಿ ವಿವರ ನಿಮಗೆ ಗೊತ್ತಾ...?? ಮೋದಿಯವರ ಬಳಿ ಎಷ್ಟು ಕಾರುಗಳಿವೆ..??ಇಲ್ಲಿದೆ ನೋಡಿ ಆಸ್ತಿ ವಿವರ....!!!!

ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿಗಳ ಬಗ್ಗೆ ಹಲವಾರು ಭಾರೀ ಚರ್ಚೆಯಾಗಿದೆ. ಈಗ ಮತ್ತೆ ಸುದ್ದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಎರಡು ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿ ಹೊಂದಿದ್ದಾರೆ. ಒಂದು ಮನೆ ಬಿಟ್ಟರೆ, ಕಾರು, ಬೈಕ್ ಇತ್ಯಾದಿ ಯಾವುದೇ ಚರಾಸ್ತಿಯನ್ನು ಹೊಂದಿಲ್ಲ. ಮನೆ, ಬ್ಯಾಂಕ್ ಬ್ಯಾಲೆನ್ಸ್, ಹೂಡಿಕೆ ಇತ್ಯಾದಿ ಮಾಹಿತಿಗಳ ವಿವರ ನೀಡಲಾಗಿದೆ.

ಮೋದಿಯವರ ವಾರ್ಷಿಕ ಆಸ್ತಿ ವಿವರವನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಬಿಡುಗಡೆ ಮಾಡಿದ್ದು, 2018ರ ಮಾರ್ಚ್ 31ರ ವರೆಗಿನ ಮಾಹಿತಿ ಒಳಗೊಂಡಿದೆ.

ಠೇವಣಿ ಮೊತ್ತ:
ಮೋದಿಯವರು ರೂ. 48,944 ನಗದು, ಗುಜರಾತಿನ ಗಾಂಧಿನಗರದ ಎಸ್ಬಿಐ ಬ್ಯಾಂಕ್ ನಲ್ಲಿ ರೂ. 11,29,690 ಹಾಗೂ ಇನ್ನೊಂದು ಖಾತೆಯಲ್ಲಿ ರೂ. 1,09,96,288 ಠೇವಣಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಮನೆ ಖರೀದಿ:
2002ರಲ್ಲಿ ರೂ. 1.30 ಲಕ್ಷ ನೀಡಿ ಗಾಂಧಿನಗರಲ್ಲಿ ವಸತಿ ಕಟ್ಟಡವೊಂದನ್ನು ಖರೀದಿಸಿದ್ದರು. ಅದರ ಬೆಲೆ ಈಗ ಒಂದು ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಚರಾಸ್ತಿಯಾಗಿ ಮನೆಯನ್ನು ಮಾತ್ರ ಹೊಂದಿರುವ ಮೋದಿ ಬಳಿ ಯಾವುದೇ ಸ್ವಂತ ಕಾರು, ಬೈಕ್ ಸೇರಿದಂತೆ ವಾಹನಗಳಿಲ್ಲ ಎಂದು ಉಲ್ಲೇಖಿಸಲಾಗಿದೆ.

ಹೂಡಿಕೆ ಮತ್ತು ಚಿನ್ನ:
ರೂ. 1,38,060 ಮೌಲ್ಯದ ಚಿನ್ನವಿದ್ದು, ಎಲ್ ಅಂಡ್ ಟಿ ಇನ್‍ಫ್ರಾಸ್ಟ್ರಕ್ಚರ್ ನಲ್ಲಿ ರೂ. 20,000 ಹೂಡಿಕೆ ಮಾಡಿದ್ದಾರೆ. ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಅಡಿ ರೂ. 5,18,235 ಹಾಗು ರೂ. 1,59,281 ಮೌಲ್ಯದ ಎಲ್‍ಐಸಿ ಪಾಲಿಸಿಯನ್ನು ಹೊಂದಿದ್ದಾರೆ.

Comments