ಡಿ.ಕೆ. ಶಿವಕುಮಾರ್​ ವಿರುದ್ಧ ಎಫ್​ಐಆರ್​; ಮತ್ತೆ ಬಂಧನ ಭೀತಿಯಲ್ಲಿ ಕಾಂಗ್ರೆಸ್​ ಪ್ರಭಾವಿ ನಾಯಕ

ಕೇಂದ್ರದ ಹಿಡಿತದಲ್ಲಿರುವ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ವಿರೋಧಿಗಳನ್ನು ಹಣಿಯುತ್ತಿದೆ ಎಂಬ ಗಂಭೀರ ಆರೋಪ ಆಗಾಗ ವ್ಯಕ್ತವಾಗುತ್ತಿದೆ. ಇದೀಗ ಡಿ.ಕೆ.ಶಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಲಿದ್ದಾರ ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ.

ಡಿ.ಕೆ. ಶಿವಕುಮಾರ್​ ವಿರುದ್ಧ ಎಫ್​ಐಆರ್​; ಮತ್ತೆ ಬಂಧನ ಭೀತಿಯಲ್ಲಿ ಕಾಂಗ್ರೆಸ್​ ಪ್ರಭಾವಿ ನಾಯಕ
ಡಿಕೆ ಶಿವಕುಮಾರ್
ನವದೆಹಲಿ: ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಪ್ರಥಮ ವರ್ತಮಾನ ವರದಿ ದಾಖಲಿಸಿದೆ (ಎಫ್​ಐಆರ್​). ಜಾರಿ ನಿರ್ದೇಶನಾಲಯದ ದೆಹಲಿ ವಿಭಾಗ ಎಫ್​ಐಆರ್​ ದಾಖಲಿಸಿದ್ದು ಯಾವುದೇ ಸಂದರ್ಭದಲ್ಲೂ ಬಂಧನವಾಗಬಹುದು ಎಂದು ಮೂಲಗಳು ತಿಳಿಸಿವೆ.

ಡಿ.ಕೆ. ಶಿವಕುಮಾರ್​ರ ದೆಹಲಿ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ 4 ಕೋಟಿ ರೂ. ನಗದು ಸಿಕ್ಕಿತ್ತು. ಈ ಸಂಬಂಧ ತನಿಖೆ ಮಾಡಿದ್ದ ಐಟಿ ಅಧಿಕಾರಿಗಳು ನಂತರ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿತ್ತು. ಇದೀಗ ಪ್ರಕರಣ ಸಂಬಂಧ ಎಫ್​ಐಆರ್​ ದಾಖಲಿಸಿಕೊಂಡು ಇ.ಡಿ. ತನಿಖೆ ಮುಂದುವರೆಸಿದೆ.

ಮನಿ ಲಾಂಡರಿಂಗ್​ ಪ್ರಕರಣವನ್ನು ಡಿ.ಕೆ. ಶಿವಕುಮಾರ್​ ವಿರುದ್ಧ ದಾಖಲಿಸಲಾಗಿದೆ. ಅಕ್ರಮವಾಗಿ ಹಣವನ್ನು ಮನೆಯಲ್ಲಿ ಶೇಖರಿಸಿಟ್ಟಿದ್ದು, ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ತನಿಖೆಯ ವೇಳೆ ತಿಳಿದು ಬಂದಿರುವುದಾಗಿ ಜಾರಿ ನಿರ್ದೇಶನಾಲಯದ ಉನ್ನತ ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯದ ಎಫ್​ಐಆರ್​ ಸಂಬಂಧ ನ್ಯೂಸ್​ 18ಗೆ ಪ್ರತಿಕ್ರಿಯಿಸಿದ ಸಂಸದ ಡಿ.ಕೆ. ಸುರೇಶ್​ ತಾವು ಕಾನೂನಿಗೆ ಬದ್ಧವಾಗಿದ್ದೇವೆ ಎಂದಿದ್ದಾರೆ. "ನಾವು (ಡಿಕೆ ಶಿವಕುಮಾರ್​, ಸುರೇಶ್​) ಯಾವುದೇ ಅಕ್ರಮವನ್ನು ಮಾಡಿಲ್ಲ. ತನಿಖೆಯನ್ನು ಎದುರಿಸಲು ನಾವು ಬದ್ಧ ಮತ್ತು ನಮಗ್ಯಾವುದೇ ಭಯವಿಲ್ಲ," ಎಂದು ಪ್ರತಿಕ್ರಿಯಿಸಿದ್ದಾರೆ.

ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿರುವ ಎಫ್​ಐಆರ್​ನಲ್ಲಿ ಡಿಕೆಶಿ ಹೊರತು ಪಡಿಸಿ, ಕರ್ನಾಟಕ ಭವನದ ಮಾಜಿ ಸಿಬ್ಬಂದಿ ರಾಜೇಂದ್ರನ್​ ಮತ್ತು ದೆಹಲಿ ಕರ್ನಾಟಕ ಭವನದ ಆಂಜನೇಯ ಹನುಮಂತ್ ಅವರನ್ನನವದೆಹಲಿ: ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಪ್ರಥಮ ವರ್ತಮಾನ ವರದಿ ದಾಖಲಿಸಿದೆ (ಎಫ್​ಐಆರ್​). ಜಾರಿ ನಿರ್ದೇಶನಾಲಯದ ದೆಹಲಿ ವಿಭಾಗ ಎಫ್​ಐಆರ್​ ದಾಖಲಿಸಿದ್ದು ಯಾವುದೇ ಸಂದರ್ಭದಲ್ಲೂ ಬಂಧನವಾಗಬಹುದು ಎಂದು ಮೂಲಗಳು ತಿಳಿಸಿವೆ.

ಡಿ.ಕೆ. ಶಿವಕುಮಾರ್​ರ ದೆಹಲಿ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ 4 ಕೋಟಿ ರೂ. ನಗದು ಸಿಕ್ಕಿತ್ತು. ಈ ಸಂಬಂಧ ತನಿಖೆ ಮಾಡಿದ್ದ ಐಟಿ ಅಧಿಕಾರಿಗಳು ನಂತರ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿತ್ತು. ಇದೀಗ ಪ್ರಕರಣ ಸಂಬಂಧ ಎಫ್​ಐಆರ್​ ದಾಖಲಿಸಿಕೊಂಡು ಇ.ಡಿ. ತನಿಖೆ ಮುಂದುವರೆಸಿದೆ.

ಮನಿ ಲಾಂಡರಿಂಗ್​ ಪ್ರಕರಣವನ್ನು ಡಿ.ಕೆ. ಶಿವಕುಮಾರ್​ ವಿರುದ್ಧ ದಾಖಲಿಸಲಾಗಿದೆ. ಅಕ್ರಮವಾಗಿ ಹಣವನ್ನು ಮನೆಯಲ್ಲಿ ಶೇಖರಿಸಿಟ್ಟಿದ್ದು, ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ತನಿಖೆಯ ವೇಳೆ ತಿಳಿದು ಬಂದಿರುವುದಾಗಿ ಜಾರಿ ನಿರ್ದೇಶನಾಲಯದ ಉನ್ನತ ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯದ ಎಫ್​ಐಆರ್​ ಸಂಬಂಧ ನ್ಯೂಸ್​ 18ಗೆ ಪ್ರತಿಕ್ರಿಯಿಸಿದ ಸಂಸದ ಡಿ.ಕೆ. ಸುರೇಶ್​ ತಾವು ಕಾನೂನಿಗೆ ಬದ್ಧವಾಗಿದ್ದೇವೆ ಎಂದಿದ್ದಾರೆ. "ನಾವು (ಡಿಕೆ ಶಿವಕುಮಾರ್​, ಸುರೇಶ್​) ಯಾವುದೇ ಅಕ್ರಮವನ್ನು ಮಾಡಿಲ್ಲ. ತನಿಖೆಯನ್ನು ಎದುರಿಸಲು ನಾವು ಬದ್ಧ ಮತ್ತು ನಮಗ್ಯಾವುದೇ ಭಯವಿಲ್ಲ," ಎಂದು ಪ್ರತಿಕ್ರಿಯಿಸಿದ್ದಾರೆಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿರುವ ಎಫ್​ಐಆರ್​ನಲ್ಲಿ ಡಿಕೆಶಿ ಹೊರತು ಪಡಿಸಿ, ಕರ್ನಾಟಕ ಭವನದ ಮಾಜಿ ಸಿಬ್ಬಂದಿ ರಾಜೇಂದ್ರನ್​ ಮತ್ತು ದೆಹಲಿ ಕರ್ನಾಟಕ ಭವನದ ಆಂಜನೇಯ ಹನುಮಂತ್ ಅವರನ್ನೂ ಹೆಸರಿಸಲಾಗಿದೆ.

ಕಳೆದ ಕೆಲ ದಿನಗಳಿಂದ ಡಿ.ಕೆ. ಶಿವಕುಮಾರ್​ ಮತ್ತು ತಮ್ಮ ಡಿ.ಕೆ. ಸುರೇಶ್​ ವಿರುದ್ಧ ಎಫ್​ಐಆರ್​ ದಾಖಲಾಗಲಿದೆ ಎಂಬ ವದಂತಿಗಳು ಕೇಳಿ ಬರುತ್ತಲೇ ಇತ್ತು. ಸಂಸದ ಡಿ.ಕೆ. ಸುರೇಶ್​ ಈ ಬಗ್ಗೆ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿದ್ದರು. ಮಾಜಿ ಸಿಎಂ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ 2017ರ ಜನವರಿ ತಿಂಗಳಿನಲ್ಲಿ ಆದಾಯ ತೆರಿಗೆ ಇಲಾಖೆಗೆ ತಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ಆರೋಪಿಸಿ ಪತ್ರವೊಂದನ್ನು ಬಿಡುಗಡೆ ಮಾಡಿದ್ದರು. ಆದರೆ ಈ ಪತ್ರ ನಕಲಿ ಎಂಬುದಾಗಿ ಬಿ.ಎಸ್​. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದರು.

ಬಿಜೆಪಿ ರಾಜಕೀಯ ಶತ್ರುಗಳನ್ನು ಹಣಿಯಲು ಆದಾಯ ತೆರಿಗೆ ಇಲಾಖೆ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್​ ನಾಯಕರು ಗಂಭೀರ ಆರೋಪ ಮಾಡಿದ್ದರು. ಈ ಆರೋಪ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶವ್ಯಾಪಿಯಾಗಿ ಕೇಳಿ ಬರುತ್ತಿರುವುದೂ ನಿಜ. ಒಟ್ಟಿನಲ್ಲಿ ಈಗ ಜಾರಿ ನಿರ್ದೇಶನಾಲಯ ಎಫ್​ಐಆರ್​ ದಾಖಲಿಸಿಕೊಂಡಿರುವ ಬೆನ್ನಲ್ಲೇ ಬಂಧನ ಭೀತಿಯನ್ನು ಡಿ.ಕೆ. ಶಿವಕುಮಾರ್​ ಎದುರಿಸುತ್ತಿರುವುದಂತೂ ಸತ್ಯ.

Comments