ಮಾಜಿ ಮತ್ತು ಹಾಲಿ ಶಾಸಕರ ಬರ್ಬರ ಹತ್ಯೆ

ಆಂಧ್ರದ ಇಬ್ಬರು ಪ್ರಭಾವಿ ರಾಜಕಾರಣಿಗಳನ್ನ ಮಾವೋವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಂದಯ ವಿಶಾಖಪಟ್ಟಣದ ಅರಕು ವ್ಯಾಲಿಯಲ್ಲಿ ನಡೆದಿದೆ.
ನಕ್ಸಲರು ತಮ್ಮ ಉಪಟಳ ಛತ್ತೀಸ್​ಗಡದಿಂದ ಆಂಧ್ರಪ್ರದೇಶಕ್ಕೆ ವಿಸ್ತರಿಸಿದ್ದಾರೆ.  

ಆಂಧ್ರದ ಇಬ್ಬರು ಪ್ರಭಾವಿ ರಾಜಕಾರಣಿಗಳನ್ನ ಮಾವೋವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಂದಯ ವಿಶಾಖಪಟ್ಟಣದ ಅರಕು ವ್ಯಾಲಿಯಲ್ಲಿ ನಡೆದಿದೆ. 

ಡಿಟಿಪಿ ಶಾಸಕ ಕಿಡರಿ ಸರ್ವೇಶ್ವರ ರಾವ್​ ಹಾಗೂ ಮತ್ತೋರ್ವ ಟಿಡಿಪಿ ನಾಯಕ, ಮಾಜಿ ಶಾಸಕನ ಸಿವೆರಿ ಸೋಮಾ ಅವರನ್ನೂ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಮಾವೋವಾದಿ ನಾಯಕರು, ಸರ್ವೇಶ್ವರ್ ರಾವ್ ಅವರಿಗೆ ಎಚ್ಚರಿಸಿದರು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

Comments