ಶಾಂತಿ ಮಾತುಕತೆ, ಸೌಹಾರ್ದಯುತ ವಾತಾವರಣ ನಿರ್ಮಾಣವಾಗಬೇಕಾದರೆ, ಮೊದಲಿಗೆ ಪಾಕಿಸ್ತಾನವು ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಬೇಕಿದೆ.
ನಮ್ಮ ಅಣ್ವಸ್ತ್ರ ಹೊಂದಿರುವ ದೇಶ, ದೇಶದ ತಂಟೆಗೆ ಬಂದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ಹಗೆ ಸಾಧಿಸುವ ಪಾಕ್ ವಿರುದ್ಧ ಭಾರತ ಸ್ನೇಹಹಸ್ತ ಚಾಚಬೇಕೆ?
ಭಾರತ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವರ ನಡುವೆ ಮುಂದಿನ ವಾರ ಶಾಂತಿ ಮಾತುಕತೆ ಸಭೆ ನಿಗದಿಯಾಗಿತ್ತು. ಆದರೆ, ಈ ಸಭೆಯನ್ನು ಭಾರತ ರದ್ದು ಪಡಿಸಲು ನಿರ್ಧರಿಸಿದೆ.
ಪಾಕ್ ಮಾತುಕತೆ ಬೇಡಿಕೆ ತಿರಸ್ಕರಿಸಿ, ಕಪಾಳಕ್ಕೆ ಬಾರಿಸಿದ ಭಾರತ!
'ನಾನು ನೀಡಿದ ಆಹ್ವಾನವನ್ನು ತಿರಸ್ಕರಿಸಿ, ಅಹಂಕಾರದ ಪ್ರತಿಕ್ರಿಯೆ ನೀಡಿರುವ ಭಾರತದ ಕ್ರಮ ನಿರಾಶೆ ತಂದಿದೆ' ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೂ ಮುನ್ನ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪಾಕಿಸ್ತಾನ ಸಚಿವ ಶಾ ಮೆಹಬೂಬ್ ಖುರೇಷಿ ಅವರು ನ್ಯೂಯಾರ್ಕ್ ನಲ್ಲಿ ಮಾತುಕತೆ ನಡೆಸಬೇಕಾಗಿತ್ತು
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಪಿನ್ ರಾವತ್, ನಮ್ಮ ಸರ್ಕಾರದ ನೀತಿ ಸ್ಪಷ್ಟವಾಗಿದೆ. ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಪಾಕಿಸ್ತಾನ ನಿಲ್ಲಿಸುವ ತನಕ ಯಾವುದೇ ರೀತಿ ಶಾಂತಿ ಮಾತುಕತೆ ಸಾಧ್ಯವಿಲ್ಲ.
ಭಯೋತ್ಪಾದಕರು ಪಾಕಿಸ್ತಾನದ ನೆಲದಲ್ಲಷ್ಟೆ ಸಕ್ರಿಯವಾಗಿಲ್ಲ. ಗಡಿ ದಾಟಿ ಬರುತ್ತಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಗಡಿ ಭದ್ರತಾ ಪಡೆಯ ಹೆಡ್ ಕಾನ್ಸ್ ಟೇಬಲ್ ನರೇಂದ್ರ ಕುಮಾರ್ ಅವರನ್ನು ಹತ್ಯೆ ಮಾಡಿದ ರೀತಿಯನ್ನು ಖಂಡಿಸಿರುವ ಭಾರತವು, ಸಭೆಯನ್ನು ರದ್ದುಗೊಳಿಸಲಿ ನಿರ್ಧರಿಸಿದೆ.
ಒಂದು ಕಡೆ ಹಿಂಸಾಚಾರ ಮತ್ತೊಂದು ಕಡೆ ಶಾಂತಿ ಮಾತುಕತೆ ಒಟ್ಟಿಗೆ ಸಾಧ್ಯವಿಲ್ಲ. ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ರಾವತ್ ಹೇಳಿದ್ದಾರೆ.


Comments
Post a Comment