ಯಂಗ್ ಫ್ರೆಂಡ್ಸ್ ಜೊತೆ ಮೋದಿ 'ಕಾನ್ ಕಿ ಬಾತ್': ನೀವು ನೋಡಲೇಬೇಕಾದ ಫೋಟೋ...!!!

ಪ್ರಧಾನಿ ನರೇಂದ್ರ ಮೋದಿ ಕಳೆದ ಸೆ.17 ರಂದು ತಮ್ಮ 68ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸ್ವಕ್ಷೇತ್ರ ವಾರಣಾಸಿಯಲ್ಲಿ ಮಕ್ಕಳ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಟ ಮೋದಿ, ಮಕ್ಕಳ ಜೊತೆಗಿನ ಮಧುರ ಕ್ಷಣಗಳನ್ನು ತಮ್ಮ ಇನ್ಸಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದಂದು ವಾರಣಾಸಿಯಲ್ಲಿದ್ದ ಪ್ರಧಾನಿ ಮೋದಿ, ಶಾಲಾ ಮಕ್ಕಳೊಂದಿಗೆ ನಕ್ಕು ನಲಿದರು. ಈ ವೇಳೆ ಶಾಲಾ ಬಾಲಕನೋರ್ವನ ಕಿವಿ ಹಿಂಡುತ್ತಿರುವ ಮೋದಿ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆಯುತ್ತಿದೆ. ಮೋದಿ ಈ ಫೋಟೋಗೆ 'ನನ್ನ ಯುವ ಮಿತ್ರರು ಮತ್ತು ನಾನು' ಎಂಬ ಶಿರ್ಷಿಕೆ ಕೂಡ ನೀಡಿದ್ದಾರೆ.

Comments