ಬಿಗ್ ಬ್ರ‍ೇಕಿಂಗ್: 'ಜನಧನ್' ಖಾತೆದಾರರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರದ ಮೋದಿ ಸರ್ಕಾರ!!!! ಯಾವುದು ಆ ಸಿಹಿ ಸುದ್ದಿ ಗೊತ್ತಾ???


ಪ್ರಧಾನಿ ನರೇಂದ್ರ ಮೋದಿಯವರ ಯಶಸ್ವಿ ಯೋಜನೆಗಳಲ್ಲಿ "ಜನಧನ್" ಯೋಜನೆಯು ಒಂದು. ಕೋಟ್ಯಾಂತರ ಬಡ ಜನರು ಬ್ಯಾಂಕ್ ಖಾತೆಗಳನ್ನು ತೆರೆಯುವಂತಾದದ್ದು ಇದೇ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರಿಂದ. ಸುಮಾರೊ ಹನ್ನೆರಡು ಕೋಟಿಗೂ ಅಧಿಕ ಬ್ಯಾಂಕ್ ಖಾತೆಗಳನ್ನು ಇದರ ಅಡಿಯಲ್ಲಿ ತೆರೆಯಲಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಈ ಯೋಜನೆಯ ಪ್ರಯೋಜನವನ್ನು ಪಡೆಯುವಂತಾಗಿದೆ.

'ಜನಧನ್' ಖಾತೆದಾರರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ


ಹೌದು, ವಿತ್ತ ಸಚಿವ ಅರುಣ್ ಜೇಟ್ಲಿ,  ಪ್ರಧಾನಿ ಮೋದಿಯವರು ಜಾರಿಗೊಳಿಸಿದ ಮಹತ್ತರ ಯೋಜನೆಯಾದ ಜನಧನ್ ಯೋಜನೆಗೆ ಮಹತ್ತರ ಬದಲಾವಣೆಯನ್ನು ಘೋಷಣೆ ಮಾಡಿದ್ದಾರೆ. ಜನಧನ್ ಖಾತೆಗೆ ದೇಶದ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅದರ ಪ್ರಯೋಜನಗಳನ್ನು ಹೆಚ್ಚಿಸುವಂತಾ ಯೋಜನೆ ಘೋಷಿಸಿದ್ದಾರೆ.

ಆ ಪ್ರಕಾರ ಜನಧನ್ ಖಾತೆಯ ಓವರ್ ಡ್ರಾಫ್ಟ್ ನ ಮೊತ್ತವನ್ನ ದುಪ್ಪಟ್ಟುಗೊಳಿಸಲಾಗಿದೆ. ಕ್ಯಾಬಿನೆಟ್ ನಿರ್ಣಯದ ಪ್ರಕಾರ 5000 ದಿಂದ 10, 000 ರೂಪಾಯಿಗೆ ಜನಧನ್ ಖಾತೆಯ ಓವರ್ ಡ್ರಾಫ್ಟ್ ಮೊತ್ತ ಏರಿಕೆಯಾಗಿದೆ. ವಯೋಮಾನದ ಮಿತಿಯನ್ನು ಕೂಡ 60 ರಿಂದ 65ವರ್ಷಕ್ಕೆ ಏರಿಸಲಾಗಿದೆ.

ಏನಿದು ಓವರ್ ಡ್ರಾಫ್ಟ್ ????

ಓವರ್ ಡ್ರಾಫ್ಟ್  ಎಂದರೆ ನಿಮ್ಮ ಖಾತೆಯಲ್ಲಿ ಶೂನ್ಯ ಮೊತ್ತ ಇದ್ದರೂ ಅನಿವಾರ್ಯ ಪರಿಸ್ಥಿಗಳಲ್ಲಿ ಹಣದ ತೊಂದರೆ ಉಂಟಾದರೆ ಓವರ್ ಡ್ರಾಫ್ಟ್  ಸೌಲಭ್ಯವನ್ನು ಬಳಸಿ ಹಣ ಪಡೆಯಬಹುದು. ಪ್ರಸ್ತುತ "ಜನಧನ್" ಯೋಜನೆಯ ಅಡಿಯಲ್ಲಿ ಖಾತೆ ತೆರೆದಿರುವವರು ಸುಮಾರು ಹತ್ತು ಸಾವಿರ ರೂಪಾಯಿವರೆಗಿನ ಓವರ್ ಡ್ರಾಫ್ಟ್  ಸೌಲಭ್ಯವನ್ನು ಪಡೆದುಕೊಳ್ಳಬಹುದು. 

ಈಗಾಗ್ಲೇ ಶೇಕಡಾ 83ರಷ್ಟು ಜನಧನ್ ಖಾತೆಗಳು ಆಧಾರ್ ನೊಂದಿಗೆ ಲಿಂಕ್ ಮಾಡಲಾಗಿದೆ. ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಅಡಿಯಲ್ಲಿ ದೇಶದ ನಾಗರಿಕರು ಅಪಘಾತ ವಿಮೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಜನಧನ್ ಖಾತೆಯನ್ನು ಹೊಂದಿದವರಲ್ಲಿ ಶೇಕಡಾ 53ರಷ್ಟು ಮಹಿಳೆಯರಿದ್ದಾರೆ. ಶೇಕಡಾ 59ರಷ್ಟು ಜನರು ಅರೆ ನಗರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಈ ಬಾರಿಯ ಬಜೆಟ್ ಘೋಷಣೆಯ ಸಂದರ್ಭದಲ್ಲಿ ಜನಧನ್ ಖಾತೆಯ ಓವರ್ ಡ್ರಾಫ್ಟ್ ಮೊತ್ತ ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈಗ ಅದು ಜಾರಿಗೆ ಬಂದಿದೆ. ಅಲ್ಲದೇ ಆಗಸ್ಟ್ 28ರಿಂದ ಪ್ರಧಾನ್ ಮಂತ್ರಿ ಅಪಘಾತ ವಿಮೆಯನ್ನ 2 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿದೆ.

Comments