ಮೋದಿಯವರನ್ನು ಕಳ್ಳ ಎಂದು ಹೇಳಿದ್ದ ರಾಹುಲ್ ಗಾಂಧಿಗೆ, ಸಚಿವ ಅರುಣ್ ಜೇಟ್ಲಿ ಕೊಟ್ಟ ತಿರುಗೇಟು ಎಂಥದ್ದು ಗೊತ್ತೆ.....???
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೋದಿ ಅವರೊಬ್ಬ 'ಕಳ್ಳ' ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ಈ ಮಾತಿಗೆ ರಾಜಕೀಯ ವಲಯದಲ್ಲಿ ಭಾರೀ ಅಕ್ರೋಶ ವ್ಯಕ್ತವಾಗಿದೆ. ರಾಹುಲ್ ಗಾಂಧಿಯ ಹೇಳಿಕೆಗೆ ಅರುಣ್ ಜೇಟ್ಲಿ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಪದೇ ಪದೇ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ 'ಬಫೂನ್ ರಾಜ' ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವ್ಯಂಗ್ಯವಾಡಿದ್ದಾರೆ.
ಫೇಸ್ ಬುಕ್ ನಲ್ಲಿ ಸುಳ್ಳುಗಳ 'ಬಫೂನ್ ರಾಜ' ಎಂಬ ' ಎಂಬ ಟೈಟಲ್ ನೊಂದಿಗೆ ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ ಅರುಣ್ ಜೇಟ್ಲಿ, ರಾಫೆಲ್ ಡೀಲ್ ಮತ್ತು 15 ಉದ್ಯಮ ಸಂಸ್ಥೆಗಳ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನಿರಂತರವಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ ಎಂದರು.. ಅವರು ತಮ್ಮ ಈ ಸುಳ್ಳು ಆರೋಪಗಳಿಗೆ ಸುಳ್ಳು ದಾಖಲೆಗಳನ್ನಾದರೂ ಒದಗಿಸಬೇಕು. ಇಲ್ಲವಾದರೇ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ ಎಂದಿದ್ದಾರೆ.


Comments
Post a Comment