ಸುದ್ದಿ ಸ್ಪೋಟ: ಸಿದ್ದು ಸಂಧಾನ ವಿಫಲ...?? ಇಂದು ರಮೇಶ್ ಜಾರಕಿಹೊಳಿ ರಾಜೀನಾಮೆ..!!!


ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಇಂದು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸೋಮವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರೂ, ಆ ಮಾತುಕತೆ ಫಲ ನೀಡಿದ ಲಕ್ಷಣ ಕಂಡುಬರುತ್ತಿಲ್ಲ! ಕಾಂಗ್ರೆಸ್ ನಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸಿಕ್ಕರೆಮಾತ್ರ ಇರುತ್ತೇನೆ ಎಂದು ತಮ್ಮ ಗುರುವಾದ ಸಿದ್ದರಾಮಯ್ಯ ಅವರಿಗೇ ಜಾರಕಿಹೊಳಿ ಷರತ್ತು ಹಾಕಿದ್ದಾರೆ ಎಂಬ ವದಂತಿಯೂ ಕೇಳಿಬರುತ್ತಿದೆ.
ಬೆಳಗಾವಿ ರಾಜಕೀಯದಲ್ಲಿ ಮೂಗುತೂರಿಸುತ್ತಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಬಗ್ಗೆ ಜಾರಕಿಹೊಳಿ ಸಹೋದರರಲ್ಲಿ ಸಾಕಷ್ಟು ಅಸಮಾಧಾನವಿದೆ. ಈ ಕುರಿತೂ ಸಿದ್ದರಾಮಯ್ಯ ಆವರೊಂದಿಗೆ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿ, ಬಿಜೆಪಿಯಿಂದ ಡಿ ಸಿಎಂ ಹುದ್ದೆಯ ಆಫರ್ ಇದೆ ಎಂಬ ಹೊಸ ಬಾಂಬ್ ಅನ್ನೂ ಸಿದ್ದರಾಮಯ್ಯ ಅವರೆದುರು ಸಿಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲವೂ ನಿಜವೇ ಆದಲ್ಲಿ ರಮೇಶ್ ಜಾರಕಿಹೊಳಿ ಇಂದು ರಾಜೀನಾಮೆ ನೀಡಿದರು ಅಚ್ಚರಿಯಿಲ್ಲ ಎಂದು ರಾಜಕೀಯ ಬೆಳವಣಿಗೆಗಳು ಹೇಳುತ್ತಿವೆ.

Comments