ಸ್ಪೋಟಕ ಸುದ್ದಿ: ಸಚಿವ ಸ್ಥಾನ ಕೊಟ್ಟರೆ ಬಿ.ಜೆ.ಪಿಗೆ ಹೋಗಲು ಸಿದ್ದ ಎಂದ ಶಾಸಕ...!!!ಯಾರು ಗೊತ್ತಾ..???

ಕೋಲಾರದಲ್ಲಿ ಮಾತನಾಡಿದ ನಾಗೇಶ್, ಸಚಿವ ಸ್ಥಾನ ನೀಡಿದರೆ ಬಿಜೆಪಿ ಬೆಂಬಲ ನೀಡಲು ಸಿದ್ಧನಾಗಿದ್ದೇನೆ. ನನಗೆ ಯಾವುದೇ ಪಕ್ಷ ಬೇಧವಿಲ್ಲ ಯಾವುದೇ ಪಕ್ಷವಾದರೂ ಸರಿ ನಾನು ಚುನಾವಣೆಯಲ್ಲಿ ಖರ್ಚು ಮಾಡಿರುವ ಹಣ ಹಾಗೂ ಸಚಿವ ಸ್ಥಾನಕೊಟ್ಟರೆ ಆ ಪಕ್ಷಕ್ಕೆ ಹೋಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಬಿಜೆಪಿ ಮುಖಂಡರು ಗಣಿ-ಧಣಿಗಳ ಮೂಲಕ ಆಪರೇಷನ್ ಕಮಲ ಮಾಡಲು ಮುಂದಾಗಿ, ನನಗೆ ಸಚಿವ ಸ್ಥಾನ ನೀಡಿದರೆ ನಾನೇ ಅವರನ್ನು ಖುದ್ದಾಗಿ ಭೇಟಿ ಮಾಡಿ ಬೆಂಬಲ ಕೊಡಲು ಸಿದ್ಧನಿದ್ದೇನೆ.

ಇದುವರೆಗೂ ಯಾರು ಸಹ ನನ್ನನ್ನು ಸಂಪರ್ಕಿಸಿಲ್ಲ. ಒಂದೊಮ್ಮೆ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿ, ಸಚಿವ ಸ್ಥಾನದ ಭರವಸೆ ನೀಡಿದರೆ, ನಾನೇ ಹೋಗಿ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ. ಇದು ಸಮ್ಮೀಶ್ರ ಸರ್ಕಾರದ ದಿಕ್ಕು ಬದಲಾಗುವಂತ ಲಕ್ಷಣಗಳು ಗೋಚರಿಸುತ್ತಿವೆ.

Comments