1ಲೀ ಪೆಟ್ರೋಲ್ ಉಚಿತ: ಭರ್ಜರಿ ಅಫರ್ ಎಲ್ಲಿ ಗೊತ್ತಾ..??

ಪೆಟ್ರೋಲ್‌ ಬೆಲೆ ಗಗನಕ್ಕೇರಿದ ಮೇಲೆ ಅದನ್ನು ಉಡುಗೊರೆಯಾಗಿ ನೀಡುವುದು ಹೊಸ ಸಂಪ್ರದಾಯವಾಗಿದೆ. ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ನವದಂಪತಿಗೆ, ಸ್ನೇಹಿತರು 5 ಲೀಟರ್‌ ಪೆಟ್ರೋಲ್‌ ನೀಡಿ ಸುದ್ದಿಯಾಗಿದ್ದರು.

ಇದೀಗ ತಮಿಳುನಾಡಿನ ಚೆನ್ನೈನ ಬೇಕರಿ ಮಾಲೀಕರೊಬ್ಬರು 499 ರು.ನ ಒಂದು ಕೆಜಿ ಕೇಕ್‌ ಖರೀದಿ ಮಾಡಿದವರಿಗೆ 1 ಲೀ.ಪೆಟ್ರೋಲ್‌ ಉಚಿತ ನೀಡುವುದಾಗಿ ಘೋಷಿಸಿ ಜನರನ್ನು ಸೆಳೆಯುವ ಯತ್ನ ಮಾಡಿದ್ದಾರೆ.

ಅಲ್ಲದೇ ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಕೃಷ್ಣಗಿರಿಯ ರಾಯಕೊಟ್ಟೈ ರಸ್ತೆಯಲ್ಲಿನ ಎಚ್‌ಪಿ ಪೆಟ್ರೋಲ್ ಪಂಪ್ ನಲ್ಲಿ ಈ ವಿಶೇಷ ಕೊಡುಗೆ ನೀಡಲಾಗಿತ್ತು. ನಗದು ರಹಿತ ವಹಿವಾಟು ಉತ್ತೇಜನಕ್ಕಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆ ಈ ವಿನೂತನ ಪ್ರಯೋಗಕ್ಕೆ ಮುಂದಾಗಿತ್ತು. ಈಗ ಮತ್ತೊಂದ್ಯ್ ರೀತಿಯಲ್ಲಿ ಪೆಟ್ರೋಲ್ ಉಚಿತವಾಗಿ ನೀಡುತ್ತಿರುವುದು ವಿಶೇಷವಾಗಿದೆ.

Comments